°
, May 20, 2024 in
Breaking News

Top Stories

EconomyPoliticsTop Stories
0

ಮಂಗಳೂರು – ಮಡ್ಗಾಂವ್‌ ವಂದೇ ಭಾರತ್‌ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ

ಮಂಗಳೂರು, ಡಿ 26: ಕರಾವಳಿ ಜನರ ನಿರೀಕ್ಷೆಯ ಮಂಗಳೂರು – ಮಡ್ಗಾಂವ್‌ ವಂದೇ ಭಾರತ್‌ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಚಾಲನೆ ಸಿಕ್ಕಿದ್ದು, ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್ , ಸ್ಥಳೀಯ ಶಾಸಕರು ಹಾಗೂ ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.

PoliticsTop Stories
0

ಪುತ್ತೂರು ನೆಹರೂನಗರ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಸಂಸದ ನಳಿನ್‌ರಿಂದ ಶಿಲಾನ್ಯಾಸ

ಪುತ್ತೂರು: ನೆಹರೂನಗರದ ವಿವೇಕಾನಂದ ಕಾಲೇಜು ಸಂಪರ್ಕ ರಸ್ತೆಯಲ್ಲಿರುವ ರೈಲ್ವೇ ಮೇಲ್ಸೇತುವೆ ಪುನರ್ನಿರ್ಮಾಣ ಕಾಮಗಾರಿಗೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ಶಿಲಾನ್ಯಾಸ ನೆರವೇರಿಸಿದರು. ಐದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ರೈಲ್ವೇ ಮೇಲ್ಸೇತುವೆಯು ಬಹು ಬೇಡಿಕೆಯ ಮೇಲ್ಸೇತುವೆಯಾಗಿದೆ. ರಾಜ್ಯಾಧ್ಯಕ್ಷ ಸ್ಥಾನವನ್ನು ವಿಜಯೇಂದ್ರರವರಿಗೆ ಹಸ್ತಾಂತರಗೈದ ಬಳಿಕ ದ.ಕ. ಸಂಸದರು ತನ್ನ ಲೋಕಸಭಾ ವ್ಯಾಪ್ತಿಯಲ್ಲಿ ಆಡಳಿತಕ್ಕೆ ಚುರುಕು ನೀಡಿದ್ದು ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಅಭಿವೃದ್ದಿ ಕಾರ್ಯಗಳ ಪರಾಮರ್ಶೆ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.

PoliticsTop Stories
0

ಪುತ್ತೂರು ನೆಹರೂನಗರ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ನಾಳೆ ಸಂಸದ ನಳಿನ್ ಚಾಲನೆ

ಪುತ್ತೂರು : ನೆಹರೂನಗರ ವಿವೇಕಾನಂದ ಕಾಲೇಜು ಮತ್ತು ಉಪ್ಪಿನಂಗಡಿ ಸಂಪರ್ಕಕ್ಕಾಗಿ ನೆಹರೂನಗರದಲ್ಲಿರುವ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕಾಗಿ ದ.ಕ. ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್‌ರವರ ಮುತುವರ್ಜಿಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಅನುದಾನ ಬಿಡುಗಡೆಗೊಳಿಸಿದ್ದು, ಈ ಕಾಮಗಾರಿಗೆ ನವೆಂಬರ್16ರಂದು ಸಂಸದ ನಳಿನ್ ಶಿಲಾನ್ಯಾಸಗೈಯಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಶಿಲಾನ್ಯಾಸ ಕಾರ್ಯಕ್ರಮವು ನೆರವೇರಿಸಿದ ಬಳಿಕ ಸಂಸದರು ಈಗಾಗಲೇ ನಡೆಯುತ್ತಿರುವ ಇತರ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

PoliticsTop Stories
0

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ

ಬೆಂಗಳೂರು : ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರ ಪುತ್ರ ಹಾಗೂ ಶಾಸಕರಾದಂತಹ ಬಿ.ವೈ ವಿಜಯೇಂದ್ರರವರು ಇಂದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷರಾದಂತಹ ಶ್ರೀ ನಳಿನ್ ಕುಮಾರ್ ಕಟೀಲ್‌ರವರು ವಿಜಯೇಂದ್ರರವರಿಗೆ ಅಧಿಕಾರ ಹಸ್ತಾಂತರಿಸಿದರು.ಪದಗ್ರಹಣ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಮಂದಿ ಗಣ್ಯರು ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

PoliticsTop Stories
0

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಆಯ್ಕೆ

ನವದೆಹಲಿ, ನ 10: ರಾಜ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇದೀಗ ಕೊನೆಗೂ ನೇಮಕವಾಗಿದೆ.

PoliticsTop Stories
0

ಜಲ ದೀಪಾವಳಿ ಉದ್ಘಾಟಿಸಿದ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು : ಇಂದು ಅಮೃತ್ 2.0 ಕಾರ್ಯಕ್ರಮದಡಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಡೆದ ಕೇಂದ್ರ ಸರಕಾರದ ಜಲ ದೀಪಾವಳಿ ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು ಎಂಬ ವಿನೂತನ ಕಾರ್ಯಕ್ರಮವನ್ನು ಇಂದು ದ.ಕ. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು, ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ಅಭಿವೃದ್ದಿಯ ನಾಗಾಲೋಟದಲ್ಲಿರುವ ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರೇರಣಾದಾಯಕ…

PoliticsTop Stories
0

ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ: ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ತರಾಟೆ ಸಂಸದ ನಳಿನ್ ಕುಮಾರ್ ಕಟೀಲ್​ ಶನಿವಾರ ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ. ಪಂಪ್ ವೆಲ್ ರಸ್ತೆ ಅಗಲೀಕರಣ ಮತ್ತು ಚರಂಡಿ ಸೇರಿದಂತೆ ಜೆಪ್ಪು, ರೈಲ್ವೇ ಬ್ರಿಡ್ಜ್​ ಕಾಮಗಾರಿಗಳ ಪರಿಶೀಲನೆ ಮಾಡಿದ್ದು, ಹೊಸ ರಸ್ತೆಗಳನ್ನ ಅಗೆದು ಹಾಕುವ ಸಂಸ್ಥೆಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳೂರು, ಅಕ್ಟೋಬರ್​​​​ 14: ಸಂಸದ ನಳಿನ್ ಕುಮಾರ್ ಕಟೀಲ್​ (Nalin Kumar Kateel) ಶನಿವಾರ ಮಂಗಳೂರಿನ ಸ್ಮಾರ್ಟ್ ಸಿಟಿ…

Top Stories
0

ಯುಎಸ್‌ ಓಪನ್‌: ನೋವಾಕ್ ಜೋಕೋವಿಚ್ ಶುಭಾರಂಭ, ಮತ್ತೆ ನಂ.1!

ಟೂರ್ನಿಗೂ ಮುನ್ನ 2ನೇ ಸ್ಥಾನದಲ್ಲಿದ್ದ ಜೋಕೊವಿಚ್, ಸ್ಪೇನ್‌ನ ಕಾರ್ಲೊಸ್ ಆಲ್ಕರಜ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಮೊದಲ ಸುತ್ತಿನಲ್ಲಿ ಜಯ ಅಗತ್ಯವಿತ್ತು. ಇದನ್ನು ಸಾಧಿಸಿದ ಅವರು ಟೂರ್ನಿ ಮುಕ್ತಾಯಗೊಂಡ ಬಳಿಕ ಅಧಿಕೃತವಾಗಿ ನಂ.1 ಸ್ಥಾನಕ್ಕೇರಲಿದ್ದಾರೆ. ಇನ್ನು 4ನೇ ಶ್ರೇಯಾಂಕಿತ ಡೆನ್ಮಾರ್ಕ್‌ನ ಹೋಲ್ಗರ್ ರ್‍ಯುನೆ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ನ್ಯೂಯಾರ್ಕ್‌(ಆ.30): ನೋವಾಕ್‌ ಜೋಕೋವಿಚ್‌ ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನಲ್ಲಿ ಶುಭಾರಂಭ ಮಾಡಿದ್ದು, ವಿಶ್ವ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ…

Top Stories
0

ವಿರಾಟ್‌ ಕೊಹ್ಲಿ ದಾಖಲೆ ಮುರಿದ ಇಸ್ರೋ, ಚಂದ್ರಯಾನ-3ಗೆ ಸಿಕ್ಕಿತು ಮತ್ತೊಂದು ಹಿರಿಮೆ!

ಚಂದ್ರಯಾನ-3 ಕುರಿತಾಗಿ ಇಸ್ರೋ ಮಾಡಿದ ಟ್ವೀಟ್‌ ನಿರೀಕ್ಷೆಯಂತೆಯೇ ಭಾರತದ ಅತ್ಯಂತ ಜನಪ್ರಿಯ ಟ್ವೀಟ್‌ ಆಗಿದೆ. 56 ಮಿಲಿಯನ್‌ ವೀಕ್ಷಣೆ ಕಂಡಿರುವ ಈ ಟ್ವೀಟ್‌ ಗರಿಷ್ಠ ಲೈಕ್‌ ಪಡೆದುಕೊಂಡ ಭಾರತದ ಟ್ವೀಟ್‌ ಎನಿಸಿದೆ. ಬೆಂಗಳೂರು (ಆ.29): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಗಸ್ಟ್‌ 23 ರಂದು ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟುವ ಮೂಲಕ ಹಲವಾರು ದಾಖಲೆಗಳನ್ನು ನಿರ್ಮಾಣ ಮಾಡಿತು. ಅಮೆರಿಕ, ರಷ್ಯಾ ಹಾಗೂ ಚೀನಾದ ಬಳಿಕ ಚಂದ್ರನ ನೆಲ ಮುಟ್ಟಿದ ವಿಶ್ವದ ನಾಲ್ಕನೇ ದೇಶ ಎನಿಸಿಕೊಂಡ ಭಾರತ, ದಕ್ಷಿಣ ಧ್ರುವದಲ್ಲಿ…

AsiaTop Stories
0

ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಚೇತರಿಕೆ, ಅಪೋಲೋದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಆರೋಗ್ಯದಲ್ಲಿಏರುಪೇರಾದ ಕಾರಣ ಇಂದು ಮುಂಜಾನೆ ಆಪೋಲೋ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಕುರಿತು ಅಪೋಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್  ಬಿಡುಗಡೆ ಮಾಡಿದೆ. ಹೆಚ್‌ಡಿ ಕುಮಾರಸ್ವಾಮಿಗೆ ತ್ವರಿತವಾಗಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಹೆಚ್‌ಡಿಗೆ ಸ್ಪಂದಿಸಿದ್ದಾರೆ. ಹೀಗಾಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. 48 ಗಂಟೆಗಳ ಕಾಲ ಹೆಚ್‌ಡಿ ಆರೋಗ್ಯದ ಮೇಲೆ ನಿಗಾವಹಿಸಲಾಗುತ್ತದೆ. ಬಳಿಕ ಆರೋಗ್ಯದ ಚೇತರಿಕೆ ನೋಡಿ, ಬಿಡುಗಡೆ ಮಾಡಲಾಗುತ್ತದೆ ಎಂದು ಆಪೋಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್‌ನಲ್ಲಿ ಹೇಳಿದ್ದಾರೆ. ಎಚ್‌ಡಿಕೆ ಹೇಳಿಕೆ ಬೆನ್ನಲ್ಲೇ…