°
, May 20, 2024 in
Breaking News
PoliticsTop Stories
0

ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ: ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ತರಾಟೆ

ಸಂಸದ ನಳಿನ್ ಕುಮಾರ್ ಕಟೀಲ್​ ಶನಿವಾರ ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ. ಪಂಪ್ ವೆಲ್ ರಸ್ತೆ ಅಗಲೀಕರಣ ಮತ್ತು ಚರಂಡಿ ಸೇರಿದಂತೆ ಜೆಪ್ಪು, ರೈಲ್ವೇ ಬ್ರಿಡ್ಜ್​ ಕಾಮಗಾರಿಗಳ ಪರಿಶೀಲನೆ ಮಾಡಿದ್ದು, ಹೊಸ ರಸ್ತೆಗಳನ್ನ ಅಗೆದು ಹಾಕುವ ಸಂಸ್ಥೆಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಅಕ್ಟೋಬರ್​​​​ 14: ಸಂಸದ ನಳಿನ್ ಕುಮಾರ್ ಕಟೀಲ್​ (Nalin Kumar Kateel) ಶನಿವಾರ ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ. ಪಂಪ್ ವೆಲ್ ರಸ್ತೆ ಅಗಲೀಕರಣ ಮತ್ತು ಚರಂಡಿ ಸೇರಿದಂತೆ ಜೆಪ್ಪು, ರೈಲ್ವೇ ಬ್ರಿಡ್ಜ್​ ಕಾಮಗಾರಿಗಳ ಪರಿಶೀಲನೆ ಮಾಡಿದ್ದು, ಹೊಸ ರಸ್ತೆಗಳನ್ನ ಅಗೆದು ಹಾಕುವ ಸಂಸ್ಥೆಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಪ್ಪು ರೈಲ್ವೇ ರಸ್ತೆ ವಿಳಂಬವಾಗಿದ್ದರಿಂದ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದು, ತಕ್ಷಣ ಕಾಮಗಾರಿ‌ ಮುಗಿಸಿ, ಇಲ್ಲವಾದರೆ ಉದ್ಘಾಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಸದ ನಳಿನ್ ಕುಮಾರ್ ಕಾಮಗಾರಿ ಪರಿಶೀಲನೆ ವೇಳೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಹಾಗೂ ಅಧಿಕಾರಿಗಳು ಭಾಗಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ. ರಸ್ತೆ ತುಂಡರಿಸಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ತಡೆಯಾಗುವುದರ ಬಗ್ಗೆ ಚರ್ಚಿಸಲು ಸಭೆ ಜೊತೆಗೆ ಮುಂದಿನ ಮಂಗಳವಾರ ಮಾಹಿತಿ ಸಹಿತ ಹಾಜರಾಗಲು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *